.ಇಂದಿನ ದಿನಮಾನಗಳಲ್ಲಿ ದಿನಗಳು ಕಳೆದಂತೆಲ್ಲ ಬೆಳ್ಳಿ ಚಿನ್ನದ ದರಗಳು ಹೆಚ್ಚಾಗುತಲೆ ಹೋಗುತಿವೆ. ಬೆಳ್ಳಿ ಮತ್ತು ಚಿನ್ನದ ಬೆಲೆಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣ ಮತ್ತು ಮತ್ತು ಹೆಚ್ಚಾಗುತ್ತಿರುವುದರಿಂದ ಆಗುವ ಪರಿಣಾಮದ ಬಗ್ಗೆ ಭಾರತವು ಏಕೆ ಇಂಗ್ಲೆಂಡಿನಿಂದ ಚಿನ್ನವನ್ನು ಮರಳಿ ತರುತಿದೆ ಇದಕ್ಕೆ ಕಾರಣ ಏನು ಎಂಬುದು ಈ ಕೆಳಗಿನಂತೆ ತಿಳಿಯೋಣ.
. ಮುಖ್ಯವಾಗಿ ಬೆಳ್ಳಿಯ ದರ ಹೆಚ್ಚಾಗುತ್ತಾ ಹೋಗುತ್ತದೆ ಇದಕ್ಕೆ ಕಾರಣವೇನೆಂಬುದು ಈ ಕೆಳಗಿನಂತೆ ತಿಳಿಯೋಣ.
1. ಬೆಳ್ಳಿಯ ಬೇಡಿಕೆ ಹೆಚ್ಚು ಪೂರೈಕೆ ಕಡಿಮೆ:-
ಮಾರುಕಟ್ಟೆಯಲ್ಲಿ ಬೆಳ್ಳಿಗೆ ಅಪಾರವಾದ ಬೇಡಿಕೆ ಇದೆ ಕಾರಣ ಬೆಳ್ಳಿಯು ಹಲವಾರು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಉದಾಹರಣೆ (electric vehicle) ಗಣಿಗಾರಿಕೆ ಮಾಡುವಾಗ ಬೆಳ್ಳಿಯನ್ನು ನೇರವಾಗಿ ತೆಗೆಯಲಾಗುವುದಿಲ್ಲ ಬದಲಾಗಿ ಬೇರೊಂದು ಲೋಹವನ್ನು ಗಣಿಗಾರಿಕೆ ಮಾಡುವಾಗ (by product) ಆಗಿ ತೆಗೆಯಲಾಗುತ್ತದೆ.
ಉದಾಹರಣೆ:-1. ತಾಮ್ರ (copper),2. Zinc ಇವುಗಳನ್ನು ಗಣಿಗಾರಿಕೆ ಮಾಡುವಾಗ ಬೆಳ್ಳಿಯು ಸ್ವಲ್ಪ ,ಸ್ವಲ್ಪ ಪ್ರಮಾಣದಲ್ಲಿ ದೊರೆಯುತ್ತದೆ. ಇದರಿಂದ ಪೂರೈಕೆಯು ಕಡಿಮೆಯಾಗುತ್ತದೆ. ಇದು ಹಳ್ಳಿಯ ದರ ಹೆಚ್ಚಳಕ್ಕೆ ಕಾರಣವಾಗುತ್ತದೆ.
2. ದೇಶದಲ್ಲಿನ ಜನರ ಬೇಡಿಕೆ: –
. ಜನರು ಬೆಳ್ಳಿಯನ್ನು ಆಬರಣಗಳಾಗಿ ಬಳಸುತ್ತಾರೆ. ಮತ್ತು ಬೆಳೆಯುವ ಹಲವಾರು ಸಾಮಗ್ರಿಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ ಹಾಗೂ ಕೈಗಾರಿಕೆಗಳಲ್ಲಿ ಕೂಡ ಇದನ್ನು ಬಳಸಲಾಗುತ್ತದೆ ಇದರಿಂದ ಬೆಳ್ಳಿಯ ದರ ಹೆಚ್ಚಾಗಲು ಕಾರಣವಾಗಿದೆ.
3. ಬೆಳ್ಳಿಯನ್ನು ಕೈಗಾರಿಕೆಗಳಲ್ಲಿ ಹೆಚ್ಚಾಗಿ ಬಳಸುತ್ತಿರುವುದು:-
.ಇದು ಬೆಳ್ಳಿಯ ದರ ಹೆಚ್ಚಾಗುವುದಕ್ಕೆ ಬಹು ಮುಖ್ಯ ಕಾರಣವಾಗಿದೆ ಏಕೆಂದರೆ ಕೈಗಾರಿಕೆಗಳಲ್ಲಿ ಬೆಳ್ಳಿಯನ್ನು ಯಥೇಚ್ಛವಾಗಿ ಬಳಸುತ್ತಿದ್ದಾರೆ ಕಾರಣ ಬೆಳ್ಳಿಯು ಒಂದು ಉತ್ತಮವಾದ ವಿದ್ಯುತ್ ಮತ್ತು ಉಷ್ಣದ ವಾಹಕವಾಗಿದೆ. (Electric vehicle) ಗಳಾದ bus, car, bike, ಮುಂತಾದವುಗಳಲ್ಲಿ ಬ್ಯಾಟರಿಗಳನ್ನು ಬಳಸಬೇಕಾಗುತ್ತದೆ ಇಷ್ಟು ದಿನ ಬ್ಯಾಟರಿಯಲ್ಲಿ ತಾಮ್ರವನ್ನು ಬಳಸಲಾಗುತ್ತಿತ್ತು ಆದರೆ ಇವಾಗ ಬೆಳ್ಳಿಯನ್ನು ಬಳಸುತ್ತಿದ್ದಾರೆ ಕಾರಣ ಇದು ಒಂದು ಉತ್ತಮವಾದ ವಿದ್ಯುತ್ ಮತ್ತು ಉಷ್ಣದ ವಾಹಕವಾಗಿರುವುದರಿಂದ.
. ಒಂದು electric bike ತಯಾರಾಗಲು 30 ಗ್ರಾಂ ಬೆಳ್ಳಿ ಬೇಕಾಗುತ್ತದೆ ಹಾಗೆಯೇ electric car ತಯಾರಾಗಲು 50ಗ್ರಾಂ ಬೆಳ್ಳಿ ಬೇಕಾಗುತ್ತದೆ ಮತ್ತು ಇದನ್ನು ಒಂದು ಬಾರಿ ಬೈಕ್ ಅಥವಾ ಕಾರಿನ ಬ್ಯಾಟರಿಗಳಲ್ಲಿ ಬಳಸಿದರೆ ಮತ್ತೆ ಪುನಃ ಬಳಸಲಾಗುವುದಿಲ್ಲ.
. ಬೆಳ್ಳಿಯನ್ನು ಮರುಬಳಕೆ ಮಾಡುವುದು ತುಂಬಾ ಕಷ್ಟಕರವಾದ ಕೆಲಸವಾಗಿದೆ.