ಬೆಳ್ಳಿಯ ದರ ಹೆಚ್ಚುತಿರಲು ಕಾರಣವೇನು? ಮತ್ತು ಏಕೆ ಚಿನ್ನವನ್ನು ಇಂಗ್ಲೆಂಡಿನಿಂದ ಭಾರತಕ್ಕೆ ತರುತ್ತಿದ್ದೇವೆ?

 

.ಇಂದಿನ ದಿನಮಾನಗಳಲ್ಲಿ ದಿನಗಳು ಕಳೆದಂತೆಲ್ಲ ಬೆಳ್ಳಿ ಚಿನ್ನದ ದರಗಳು ಹೆಚ್ಚಾಗುತಲೆ ಹೋಗುತಿವೆ. ಬೆಳ್ಳಿ ಮತ್ತು ಚಿನ್ನದ ಬೆಲೆಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣ ಮತ್ತು ಮತ್ತು ಹೆಚ್ಚಾಗುತ್ತಿರುವುದರಿಂದ ಆಗುವ ಪರಿಣಾಮದ ಬಗ್ಗೆ ಭಾರತವು ಏಕೆ ಇಂಗ್ಲೆಂಡಿನಿಂದ ಚಿನ್ನವನ್ನು ಮರಳಿ ತರುತಿದೆ ಇದಕ್ಕೆ ಕಾರಣ ಏನು ಎಂಬುದು ಈ ಕೆಳಗಿನಂತೆ ತಿಳಿಯೋಣ. 

. ಮುಖ್ಯವಾಗಿ ಬೆಳ್ಳಿಯ ದರ ಹೆಚ್ಚಾಗುತ್ತಾ ಹೋಗುತ್ತದೆ ಇದಕ್ಕೆ ಕಾರಣವೇನೆಂಬುದು ಈ ಕೆಳಗಿನಂತೆ ತಿಳಿಯೋಣ.

1. ಬೆಳ್ಳಿಯ ಬೇಡಿಕೆ ಹೆಚ್ಚು ಪೂರೈಕೆ ಕಡಿಮೆ:-

ಮಾರುಕಟ್ಟೆಯಲ್ಲಿ ಬೆಳ್ಳಿಗೆ ಅಪಾರವಾದ ಬೇಡಿಕೆ ಇದೆ ಕಾರಣ ಬೆಳ್ಳಿಯು ಹಲವಾರು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಉದಾಹರಣೆ (electric vehicle) ಗಣಿಗಾರಿಕೆ ಮಾಡುವಾಗ ಬೆಳ್ಳಿಯನ್ನು ನೇರವಾಗಿ ತೆಗೆಯಲಾಗುವುದಿಲ್ಲ ಬದಲಾಗಿ ಬೇರೊಂದು ಲೋಹವನ್ನು ಗಣಿಗಾರಿಕೆ ಮಾಡುವಾಗ (by product) ಆಗಿ ತೆಗೆಯಲಾಗುತ್ತದೆ.

ಉದಾಹರಣೆ:-1. ತಾಮ್ರ (copper),2. Zinc ಇವುಗಳನ್ನು ಗಣಿಗಾರಿಕೆ ಮಾಡುವಾಗ ಬೆಳ್ಳಿಯು ಸ್ವಲ್ಪ ,ಸ್ವಲ್ಪ ಪ್ರಮಾಣದಲ್ಲಿ ದೊರೆಯುತ್ತದೆ. ಇದರಿಂದ ಪೂರೈಕೆಯು ಕಡಿಮೆಯಾಗುತ್ತದೆ. ಇದು ಹಳ್ಳಿಯ ದರ ಹೆಚ್ಚಳಕ್ಕೆ ಕಾರಣವಾಗುತ್ತದೆ. 

2. ದೇಶದಲ್ಲಿನ ಜನರ ಬೇಡಿಕೆ: –

. ಜನರು ಬೆಳ್ಳಿಯನ್ನು ಆಬರಣಗಳಾಗಿ ಬಳಸುತ್ತಾರೆ. ಮತ್ತು ಬೆಳೆಯುವ ಹಲವಾರು ಸಾಮಗ್ರಿಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ ಹಾಗೂ ಕೈಗಾರಿಕೆಗಳಲ್ಲಿ ಕೂಡ ಇದನ್ನು ಬಳಸಲಾಗುತ್ತದೆ ಇದರಿಂದ ಬೆಳ್ಳಿಯ ದರ ಹೆಚ್ಚಾಗಲು ಕಾರಣವಾಗಿದೆ.

3. ಬೆಳ್ಳಿಯನ್ನು ಕೈಗಾರಿಕೆಗಳಲ್ಲಿ ಹೆಚ್ಚಾಗಿ ಬಳಸುತ್ತಿರುವುದು:-

.ಇದು ಬೆಳ್ಳಿಯ ದರ ಹೆಚ್ಚಾಗುವುದಕ್ಕೆ ಬಹು ಮುಖ್ಯ ಕಾರಣವಾಗಿದೆ ಏಕೆಂದರೆ ಕೈಗಾರಿಕೆಗಳಲ್ಲಿ ಬೆಳ್ಳಿಯನ್ನು ಯಥೇಚ್ಛವಾಗಿ ಬಳಸುತ್ತಿದ್ದಾರೆ ಕಾರಣ ಬೆಳ್ಳಿಯು ಒಂದು ಉತ್ತಮವಾದ ವಿದ್ಯುತ್ ಮತ್ತು ಉಷ್ಣದ ವಾಹಕವಾಗಿದೆ. (Electric vehicle) ಗಳಾದ bus, car, bike, ಮುಂತಾದವುಗಳಲ್ಲಿ ಬ್ಯಾಟರಿಗಳನ್ನು ಬಳಸಬೇಕಾಗುತ್ತದೆ ಇಷ್ಟು ದಿನ ಬ್ಯಾಟರಿಯಲ್ಲಿ ತಾಮ್ರವನ್ನು ಬಳಸಲಾಗುತ್ತಿತ್ತು ಆದರೆ ಇವಾಗ ಬೆಳ್ಳಿಯನ್ನು ಬಳಸುತ್ತಿದ್ದಾರೆ ಕಾರಣ ಇದು ಒಂದು ಉತ್ತಮವಾದ ವಿದ್ಯುತ್ ಮತ್ತು ಉಷ್ಣದ ವಾಹಕವಾಗಿರುವುದರಿಂದ.

. ಒಂದು electric bike ತಯಾರಾಗಲು 30 ಗ್ರಾಂ ಬೆಳ್ಳಿ ಬೇಕಾಗುತ್ತದೆ ಹಾಗೆಯೇ electric car ತಯಾರಾಗಲು 50ಗ್ರಾಂ ಬೆಳ್ಳಿ ಬೇಕಾಗುತ್ತದೆ ಮತ್ತು ಇದನ್ನು ಒಂದು ಬಾರಿ ಬೈಕ್ ಅಥವಾ ಕಾರಿನ ಬ್ಯಾಟರಿಗಳಲ್ಲಿ ಬಳಸಿದರೆ ಮತ್ತೆ ಪುನಃ ಬಳಸಲಾಗುವುದಿಲ್ಲ.

. ಬೆಳ್ಳಿಯನ್ನು ಮರುಬಳಕೆ ಮಾಡುವುದು ತುಂಬಾ ಕಷ್ಟಕರವಾದ ಕೆಲಸವಾಗಿದೆ. 

 

"ಸಿಲ್ವರ್ ಬಾರ್ ಗಳ ಚಿತ್ರ"

3. ಹೆಚ್ಚುತ್ತಿರುವ ಹಣದುಬ್ಬರ, ಕೇಂದ್ರೀಯ ಬ್ಯಾಂಕುಗಳು ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿನ ಕಡಿಮೆ ಬಡ್ಡಿ ದರಗಳು , ಯುದ್ಧದ ವಾತಾವರಣದಿಂದ ಕೂಡಿದ ಕಾಲ ಇವೆಲ್ಲಾ ಕಾರಣಗಳಿಂದ ಬೆಳ್ಳಿಯ ದರ ಹೆಚ್ಚಾಗುತ್ತಿದೆ. 

ವಿದೇಶದಲ್ಲಿ ಇಟ್ಟಂತಹ ಚಿನ್ನವನ್ನು ಏಕೆ ಮತ್ತೆ ನಮ್ಮ ದೇಶಕ್ಕೆ ಮರಳಿ ತರುತ್ತಿದ್ದೇವೆ?

"ಬಾರ್ ರೂಪದಲ್ಲಿರುವ ಚಿನ್ನದ ಚಿತ್ರ."

 

. ಎಲ್ಲಾ ದೇಶಗಳ ಕೇಂದ್ರ ಬ್ಯಾಂಕುಗಳು ತಮ್ಮಲ್ಲಿರುವ ವಿದೇಶಿ ವಿನಿಮಯವನ್ನು ಅಥವಾ ಚಿನ್ನ ವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್,(BOE) ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ (BIS) ನಲ್ಲಿ ಇಡಲು ಬಯಸುತ್ತವೆ. ಕಾರಣ ಅಲ್ಲಿನ ಭದ್ರತೆ ಹಾಗೂ ವ್ಯವಹಾರಕ್ಕೆ ಸುಲಭವಾಗುತ್ತದೆ ಎಂಬ ಉದ್ದೇಶದಿಂದ. 

. ನಮ್ಮ ದೇಶವು ಕೂಡ ಇಂಗ್ಲೆಂಡಿನಲ್ಲಿ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ನಲ್ಲಿ ಇಡಲಾಗಿತ್ತು ಆದರೆ ಇವಾಗ ಚಿನ್ನವನ್ನು ಮರಳಿ ನಮ್ಮ ದೇಶಕ್ಕೆ ತೆಗೆದುಕೊಂಡು ಬರಲಿದ್ದಾರೆ ಕಾರಣ Russia vs Ukraine ಯುದ್ಧ ವಾದಾಗ ಅಮೇರಿಕಾ ರಷ್ಯಾದ ಮೇಲೆ ಆರ್ಥಿಕ ಬಂಧನ ವನ್ನು ಹಾಕಿತು. ಮತ್ತು ರಷ್ಯಾ ಅಮೆರಿಕದ ಬ್ಯಾಂಕುಗಳಲ್ಲಿ ಇಟ್ಟಿದ್ದ ಹಣದ ಮೇಲೆ ಅಮೆರಿಕವು ಬಂಧನವನ್ನು ಹಾಕಿತು. ಇದರಿಂದಾಗಿ ನಮ್ಮ ದೇಶವು ಚಿನ್ನವನ್ನು ಮರಳಿ ತರುವುದಕ್ಕೆ ಇದು ಕೂಡ ಒಂದು ಕಾರಣವಾಗಿದೆ.

.2025 ಸೆಪ್ಟೆಂಬರ ಹೊತ್ತಿಗೆ ಭಾರತದ ಒಟ್ಟು ಚಿನ್ನದ ನಿಕ್ಷೇಪಗಳು 880 ಟನ್ ಇದೆ. ಇದು USD 100 ಬಿಲಿಯನ್ ಗಿಂತಲೂ ಹೆಚ್ಚು.

. RBI ಇದರಲ್ಲಿ 274 ಟನ್ ಚಿನ್ನವನ್ನು ವಾಪಸ್ ತಂದಿದೆ. ವಿದೇಶದಲ್ಲಿ ಚಿನ್ನವನ್ನ ಇಡಲು ಮುಖ್ಯ ಕಾರಣವೇನೆಂದರೆ ಕಾರಣವೇನೆಂದರೆ  ವಿದೇಶಿ ವಿನಿಮಯ ಕಾರ್ಯಗಳು ಸುಲಭವಾಗುತ್ತವೆ ಎಂಬ ಉದ್ದೇಶದಿಂದ.

.ಭಾರತವು ಇಷ್ಟು ದಿನಗಳವರೆಗೆ ಬೇರೊಂದು ದೇಶದ ಬ್ಯಾಂಕುಗಳಲ್ಲಿ ನಮ್ಮ ದೇಶದ ವಿದೇಶಿ ವಿನಿಮಯವನ್ನು ಇಡಲು ಕಾರಣವೇನೆಂದರೆ.

1.ರಾಷ್ಟ್ರ ರಾಷ್ಕ್ರ ಗಳ ಮಟ್ಟದಲ್ಲಿ ವೈವಾಟು ಸುಲಭವಾಗುತ್ತದೆ ಎಂಬ ಉದ್ದೇಶದಿಂದ.

2. ಜಾಗತಿಕ ನಂಬಿಕೆ. 

3. ಅಂತರಾಷ್ಟ್ರೀಯ ವ್ಯವಹಾರ ಸೌಲಭ್ಯ. 

4. ಸುರಕ್ಷತೆ ಮತ್ತು ವಿಶ್ವಾಸ. 

5. ತ್ವರಿತ ಲಿಕ್ವಿಡಿಟಿ .

6 ವಿಶ್ವ ವಿತರಣಾ.

7. ಆರ್ಥಿಕ ವಿಶ್ವಾಸ.

.ಇತ್ತೀಚಿಗೆ ಭಾರತ ದೇಶವು ಇಂಗ್ಲೆಂಡಿನಿಂದ ಸುಮಾರು100 ಟನ್ ಚಿನ್ನವನ್ನು ಹಿಂತೆಗೆದುಕೊಂಡಿದೆ.

*ಭಾರತ ದೇಶವು ವಿದೇಶದಲ್ಲಿ ಇಟ್ಟಿರುವಂತಹ ಚಿನ್ನವನ್ನು ಹಿಂತೆಗೆದುಕೊಳ್ಳುತ್ತಿರುವುದಕ್ಕೆ ಕಾರಣಗಳು:-

1. ಆರ್ಥಿಕ ಸುರಕ್ಷತೆ.

2. ಕಡಿಮೆ ಖರ್ಚು.

3. ಸಂಪೂರ್ಣ ನಿಯಂತ್ರಣ.

4. ಭವಿಷ್ಯದ ಅಪಾಯಗಳಿಂದ ರಕ್ಷಣೆ.

 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

Scroll to Top