ನಿಮಗೆ ಗೊತ್ತಾ ಚಂದ್ರ ಹೇಗೆ ಹುಟ್ಟಿದ ಅಂತ?

ನಾವು ರಾತ್ರಿ ಆಕಾಶದಲ್ಲಿ ಸುಂದರವಾದ ಮತ್ತು ಆಕರ್ಷಕವಾದ ಚಂದ್ರನನ್ನು ನೋಡಿರುತ್ತೇವೆ ಆದರೆ

ಯಾವತ್ತಾದರೂ ಯೋಚನೆ ಮಾಡಿದ್ದೀರಾ ಚಂದ್ರ ಹೇಗೆ ಹುಟ್ಟಿದ ಅಂತ?

. ಚಂದ್ರನ ಹುಟ್ಟಿನ ಬಗ್ಗೆ ಪೌರಾಣಿಕವಾಗಿ ಮತ್ತು ವೈಜ್ಞಾನಿಕವಾಗಿ ಕಾರಣಗಳು ಇವೆ. ಮತ್ತು ಚಂದ್ರ ಯಾಕೆ ಭೂಮಿ ಸುತ್ತ ಸುತ್ತುತ್ತಾನೆ ಮತ್ತು ಚಂದ್ರನ ಹುಟ್ಟಿನ ರಹಸ್ಯ ಮತ್ತು ಚಂದ್ರನಿಂದ ಭೂಮಿಗೆ ಆಗುವ ಲಾಭಗಳು ಚಂದ್ರ ಯಾವ ರೀತಿಯಾಗಿ ಹುಟ್ಟಿದ ಎಂಬುದನ್ನು ತಿಳಿಯೋಣ. 

 

 

. ಚಂದ್ರನ ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಉದಯಿಸಿದ ಎಂದು ವಿಜ್ಞಾನವು ಹೇಳುತ್ತದೆ. ಇದಕ್ಕೆ ವಿಜ್ಞಾನವು ವೈಜ್ಞಾನಿಕವಾಗಿಯೂ ಸಾಬೀತುಪಡಿಸಿದೆ. 

ಹಾಗಾದರೆ ಚಂದ್ರನ ಹುಟ್ಟಿಗೆ ಕಾರಣವೇನು:-

ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಭೂಮಿಗೆ ಒಂದು ಭೂಮಿಯ ಗಾತ್ರದಲ್ಲಿ ಇರುವ ದೊಡ್ಡದಾದ ಆಕಾಶ ಕಾಯವು ಬಂದು ಭೂಮಿಗೆ ಅಪ್ಪಳಿಸಿತು ಆ ಸಂದರ್ಭದಲ್ಲಿ ಭೂಮಿಯು ಬೆಂಕಿಯ ಹುಂಡಿಯಾಗಿತ್ತು. 
ಆ ಆಕಾಶ ಕಾಯವು ಬಂದು ಅಪ್ಪಳಿಸಿದ ರಭಸಕ್ಕೆ ಬೆಂಕಿಯ ಉಂಡೆಯಾಗಿದ್ದ ಭೂಮಿಯ ಅರ್ಧ ಭಾಗವು ಬಾಹ್ಯಾಕಾಶದಲ್ಲಿ ಚಿದ್ರ ಚಿದ್ರವಾಗಿ ಹೋಯಿತು ಅಂತರ ಕಾಲಕ್ರಮೇಣ ಲಕ್ಷಾಂತರ ವರ್ಷಗಳಲ್ಲಿ ಚಿದ್ರ ಚಿದ್ರವಾಗಿದ್ದ ಕಣಗಳು ಒಂದು ಗೂಡಲಾರಂಭಿಸಿದವು.
ಒಂದುಗೂಡಿ ರೂಪಗೊಂಡ ಉಪಗ್ರಹವೇ ಅದುವೇ  ಇಂದಿಗೂ ನಮ್ಮ ಭೂಮಿಯನ್ನು ಸುತ್ತುತ್ತಿರುವ ಸುಂದರವಾದ ಚಂದ್ರ.

ಚಂದ್ರನು ಭೂಮಿಯನ್ನು ಯಾಕೆ ಸುತ್ತಲ ಆರಂಭಿಸಿದನು:-

ಚಂದ್ರನಿಗೆ ಭೂಮಿಗಿಂತ ಗಾತ್ರದಲ್ಲಿ ಚಿಕ್ಕದಾಗಿದೆ ಮತ್ತು ಗುರುತ್ವಾಕರ್ಷಣ ಬಲವೂ ಕೂಡ ಕಡಿಮೆ ಇದೆ ಮತ್ತು ಭೂಮಿಗೆ ಗುರುತ್ವಾಕರ್ಷಣ ಬಲ ಇರುವುದರಿಂದ ಚಂದ್ರನ್ನು ನಮ್ಮ ಭೂಮಿಯನ್ನು  ಅಂದಿನಿಂದಲೂ ಇಲ್ಲಿಯವರೆಗೆ ನಮ್ಮ ಭೂಮಿಯನ್ನೇ ಸುತ್ತುತ್ತಾ ಬಂದಿದ್ದಾನೆ
ಆದರೆ ಒಂದು ದುಃಖಕರವಾದ ಸಂಗತಿ ಇದೆ ಅದು ಏನೆಂದರೆ ಚಂದ್ರನು ಭೂಮಿಯಿಂದ ದೂರಕ್ಕೆ ಸರಿಯುತ್ತಿದ್ದಾನೆ
ಚಂದ್ರನು ಪ್ರತಿ ವರ್ಷ ಸುಮಾರು 3.8 ಸೆಂಟಿಮೀಟರ್ ದೂರ ಸರಿದಿದ್ದಾನೆ.
  • ನೂರು ವರ್ಷಗಳಲ್ಲಿ 3.8 ಮೀಟರ್
  • ಒಂದು ಮಿಲಿಯನ್ ವರ್ಷಗಳಲ್ಲಿ 38 ಕಿಲೋಮೀಟರ್
  • ಈ ಅಂತರವನ್ನು ವಿಜ್ಞಾನಿಗಳು ಲೋನಾರ್ ಲೇಸರ್ ರೇಂಜಿಂಗ್ ಮೂಲಕ ಅಳೆಯುತ್ತಾರೆ. ಅಪೋಲೋ ಮಿಷನ್ ಗಳಲ್ಲಿ ಚಂದ್ರನ ಮೇಲೆ ಇಟ್ಟಿರುವ ಪ್ರತಿಫಲಕಗಳ ಸಹಾಯದಿಂದ ಇದು ಅತ್ಯಂತ ನಿಖರವಾಗಿ ಅಳೆಯಲಾಗುತ್ತದೆ.
  • ಚಂದ್ರನು ದೂರ ಹರಿಯುತ್ತಿರುವುದಕ್ಕೆ ಕಾರಣ ಭೂಮಿಯ ವೇಗವಾದ ತಿರುಗುವಿಕೆ.
  • ಚಂದ್ರನು ಭೂಮಿಯಿಂದ ನಿಧಾನವಾಗಿ ದೂರವಾಗುತ್ತಿದ್ದಾನೆ.
ಸುಂದರವಾದ ಚಂದ್ರನ ಚಿತ್ರ
ಚಂದ್ರನ ಹುಟ್ಟಿದ ಸಿದ್ಧಾಂತ ಯಾವುದೇಂದರೆ ಮಹಾಸ್ಪೋಟ ಬಿಗ್ ಬ್ಯಾಂಗ ಥಿಯರಿ ಎಂದು ಕರೆಯುತ್ತಾರೆ
ಮತ್ತು ಭೂಮಿಗೆ ಬಂದು ಅಪ್ಪಳಿಸಿದ ಆ ಆಕಾಶ ಕಾಯದ ಹೆಸರನ್ನು ವಿಜ್ಞಾನಿಗಳು ಹೀಗೆ ಕರೆಯುತ್ತಾರೆ ಅದನ್ನು ಥಿಯಾ ಎಂದು ಕರೆಯುತ್ತಾರೆ.
ಚಂದ್ರನಿಗೆ ಸ್ವತಹ ಬೆಳಕೆಲ್ಲ ಅದು ಸೂರ್ಯನಿಂದ ಬೆಳಕನ್ನು ಪಡೆದು ಹೊಳೆಯುತ್ತಾನೆ.
ಚಂದ್ರನಲ್ಲಿ ನೀರಿನ ಕುಳಿಗಳಿರುವುದು ಕಂಡುಬಂದಿದೆ.
ಇಂದಿನ ಆಧುನಿಕ ಯುಗದಲ್ಲಿ ವೈಜ್ಞಾನಿಗಳು ಚಂದ್ರನಲ್ಲಿ ಇನ್ನು ಹಲವಾರು ಅನ್ವೇಷಣೆಗಳನ್ನು ಕೈಗೊಳ್ಳುತ್ತಿದ್ದಾರೆ ಭಾರತ ಸೇರಿದಂತೆ ಅಮೆರಿಕ ಚೀನಾ ರಷ್ಯಾ ಜಪಾನ್ ಮುಂತಾದ ದೇಶಗಳು ಚಂದ್ರನ ಮೇಲೆ ಅನ್ವೇಷಣೆಗಳನ್ನು ಕೈಗೊಂಡು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ.

ನಮ್ಮ ಚಂದ್ರನು ಭೂಮಿಯಿಂದ ದೂರವಾಗುತ್ತಿರುವುದು ಏಕೆ? ಈ ಲೇಖನವನ್ನು ಓದಿ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

Scroll to Top